ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯ ಹಳೆಯ ಕೈಬರಹ ದಾಖಲೆಗಳನ್ನು ತಾಲ್ಲೂಕು ಕಛೇರಿಗಳಲ್ಲಿ ಪಡೆದುಕೊಳ್ಳಲು ಸಾರ್ವಜನಿಕರು ಮತ್ತು ರೈತರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದರು ಮತ್ತು ಕಂದಾಯ ಇಲಾಖೆಗಳಲ್ಲಿ ಲಂಚ ವ್ಯವಹಾರದಿಂದ ಬೇಸತ್ತಿದ್ದರು. ಆದರೆ ಈ ತೊಂದರೆಗಳನ್ನು ಮನಗಂಡ ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಎಲ್ಲಾ ಹಳೆಯ ದಾಖಲೆಗಳು ತಮ್ಮ ಲ್ಯಾಪ್ ಟಾಪ್ ಮತ್ತು ಮೊಬೈಲ್ ಗಳಲ್ಲೇ ಲಭ್ಯವಾಗುವಂತೆ ಯೋಜನೆ ರೂಪಸಿದ್ದಾರೆ.
ಮೇಲೆ ತಿಳಿಸಿರುವಂತೆ ಕರ್ನಾಟಕ ಸರ್ಕಾರದ ಕಂದಾಯ ಸಚಿವರು “ಭೂ ಸುರಕ್ಷಾ” ಎಂಬ ಯೋಜನೆಯಡಿ ಕರ್ನಾಟಕದ ಎಲ್ಲಾ ಜಮೀನುಗಳ ಹಳೆಯ ದಾಖಲೆಗಳನ್ನು ತಮ್ಮ ತಮ್ಮ ಕೈಬೆರಳುಗಳ ತುದಿಯಲ್ಲಿ ಎಟುಕುವಂತೆ ಯೋಜನೆಯನ್ನು ರೂಪಿಸಿ, ಎಲ್ಲಾ ರೈತರಿಗೂ ಹಾಗೂ ಸಾರ್ವಜನಿಕರಿಗೂ ಅನುಕೂಲ ಮಾಡಿದ್ದಾರೆ.
ಯೋಜನೆಯ ಉದ್ದೇಶ:
ಮೇಲೆ ತಿಳಿಸಿದಂತೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಈ ಕೆಳಕಂಡ ತೊಂದರೆಗಳನ್ನು ಬಗೆಹರಿಸಲು ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
· ರೈತರಿಗೂ ಹಾಗೂ ಸಾರ್ವಜನಿಕರಿಗೂ ತಮ್ಮ ತಮ್ಮ ಜಮೀನಿನ ಹಳೆಯ ದಾಖಲೆಗಳು ಸುಲಭವಾಗಿ ಯಾವ ಕಛೇರಿಗೂ ಅಲೆದಾಡದಂತೆ ತಾವು ಇರುವಲ್ಲಿಯೇ ದಾಖಲೆಗಳನ್ನು ಪಡೆಯಲು ಅನುಕೂಲ.
· ಸಾಕಷ್ಟು ಹಳೆಯ ದಾಖಲೆಗಳು ಸರ್ಕಾರಿ ಕಛೇರಿಗಳಲ್ಲಿಯೇ ಕಳೆದುಹೋಗಿ ರೈತರಿಗೆ ತಮ್ಮ ಜಮೀನಿನ ದಾಖಲೆಗಳು ಲಭ್ಯವಾಗದೇ ತಮ್ಮ ಜಮೀನಿನ ದಾಖಲೆಗಳ ತಿದ್ದುಪಡಿ ಮಾಡಿಕೊಳ್ಳಲು ಮತ್ತು ವರ್ಗಾವಣೆ ಮಾಡಿಕೊಳ್ಳಲು ಮತ್ತು ಮಾರಾಟ ಮಾಡಲು ತುಂಬಾ ತೊಂದರೆಯಾಗುತ್ತಿತ್ತು ಆದ್ದರಿಂದ ಈಗ ಡಿಜಿಟಲೀಕರಣ ಮಾಡುತ್ತಿರುವುದರಿಂದ ದಾಖಲೆಗಳು ಕಳೆದುಹೋಗುವುದು ತಪ್ಪತ್ತದೆ.
· ಅಕ್ರಮವಾಗಿ ಹಣ ಪಡೆದು ದಾಖಲೆಗಳ ತಿದ್ದುಪಡಿ ಮತ್ತು ಬೇಕಂತಲೇ ದಾಖಲೆಗಳ ನಾಶ ಮಾಡುತ್ತಿರುವುದು ತಪ್ಪುತ್ತದೆ.
· ಸಾವಿರಾರು ರೂಪಾಯಿಗಳು ಲಂಚ ನೀಡದೇ ಕೇವಲ ದಾಖಲೆಯ ಶುಲ್ಕವನ್ನು ಪಾವತಿಸಿ ನೇರವಾಗಿ ದಾಖಲೆಯನ್ನು ಪಡೆಯಬಹುದು.
· ಮದ್ಯವರ್ತಿಗಳ ಹಾವಳಿಯನ್ನು ತಪ್ಪಿಸಬಹುದು.
Bhu Suraksha ಭೂ ಸುರಕ್ಷಾ ಯೋಜನೆಯು ಜಾರಿಗೆ ಬಂದ ದಿನಾಂಕ:
ಭೂ ಸುರಕ್ಷಾ ಯೋಜನೆಯು 2024ರ ಜನವರಿ ತಿಂಗಳಿನಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಜಾರಿಗೆ ಬಂದಿತು
ಹಳೆಯ ಕೈ ಬರಹ ಎಂ ಆರ್ ( ಮ್ಯುಟೇಷನ್) ದಾಖಲೆಗಳನ್ನು ಪಡೆಯುವುದು ಹೇಗೆ.?
ನಾವು ಇಂದಿನ ಸಂಚಿಕೆಯಲ್ಲಿ ಹಳೆಯ ಕೈ ಬರಹ ಎಂ ಆರ್ (ಮ್ಯುಟೇಷನ್) ದಾಖಲೆಗಳನ್ನು ನಿಮ್ಮ ಮೊಬೈಲ್ ಅಥವಾ ಲ್ಯಾಪ್ ಟಾಪ್ ನಲ್ಲಿ ಪಡೆಯುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.
ಮೊದಲು ಕರ್ನಾಟಕ ಸರ್ಕಾರದ ಭೂ ಸುರಕ್ಷಾ ಯೋಜನೆಯ ವೆಬ್ ಸೈಟ್ ಆದ https://recordroom.karnataka.gov.in ಅನ್ನು ತೆರೆಯಿರಿ
ನಂತರ Main Menu ಮೇನ್ ಮೆನುವಿನಲ್ಲಿ “ನಾಗರೀಕ ಸೇವೆ” ( Citizen Service ) ಎಂಬುದರ ಮೇಲೆ ಕ್ಲಿಕ್ ಮಾಡಿ.
ನಂತರ ಚಿತ್ರದಲ್ಲಿ ಕಾಣುವಂತೆ ನಿಮ್ಮ ಮೊಬೈಲ್ ನಂಬರನ್ನು ನಮೂದಿಸಿ ನಂತರ ಓಟಿಪಿ ರಚಿಸಿ ಮೇಲೆ ಕ್ಲಿಕ್ ಮಾಡಿ, ತಕ್ಷಣ ನಿಮ್ಮ ಮೊಬೈಲ್ ಗೆ ಓಟಿಪಿ ಬರುತ್ತದೆ, ನಂತರ ಅಲ್ಲಿ ಓಟಿಪಿ ನಮೂದಿಸಿ ಲಾಗಿನ್ ಮೇಲೆ ಕ್ಲಿಕ್ ಮಾಡಿ,
ನಂತರ ಮೇಲೆ ಕಾಣಿಸಿದ ಚಿತ್ರದಂತೆ "ಕಡತ ಶೋಧಿಸು" ಮೇಲೆ ಕ್ಲಿಕ್ ಮಾಡಿ
ಇದರಲ್ಲಿ ನೀವು ನೋಡಲು ಬಯಸುತ್ತಿರುವ ಹಳೆಯ ದಾಖಲೆಯ ವಿವರಗಳನ್ನು ಬರೆಯಿರಿ, ಅಂದರೆ ನೀವು ಯಾವ ಗ್ರಾಮದ, ಯಾವ ಸರ್ವೆ ನಂಬರಿನ ಮ್ಯಟೇಷನ್ ದಾಖಲೆ ನೋಡಲು ಬಯಸುತ್ತೀರೋ ಆ ವಿವರವನ್ನು ಬರೆದು, ಭಾಷೆಯನ್ನು ಆಯ್ಕೆ ಮಾಡಿ ಹೊಸ ವಿನಂತಿಯನ್ನು ರಚಿಸಿ ಬಟನ್ ಮೇಲೆ ಕ್ಲಿಕ್ ಮಾಡಿ
ಕ್ಲಿಕ್ ಮಾಡಿದ ನಂತರ ಮೇಲೆ ಕಾಣಿಸಿದ ಚಿತ್ರದಂತೆ “ಫಿಲ್ಟರ್ ಮೂಲಕ ದಾಖಲೆಗಳನ್ನು ಹುಡುಕಿ” (Search by Jurisdiction / Year / Category) ಮೇಲೆ ಕ್ಲಿಕ್ ಮಾಡಿ.
ನಂತರ ಕಾರ್ಯವ್ಯಾಪ್ತಿ ( Jurisdiction) ಯಲ್ಲಿ Talluk Level ನ್ನು ಆಯ್ಕೆ ಮಾಡಿ ನಂತರ ನಿಮ್ಮ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿಗಳನ್ನು ಆಯ್ಕೆ ಮಾಡಿ. ನಂತರ “ಫೈಲ್/ರಿಜಿಸ್ಟರ್” ಸೆಕ್ಷನ್ ನಲ್ಲಿ Register ಅನ್ನು ಆಯ್ಕೆ ಮಾಡಿ
“ಫೈಲ್/ರಿಜಿಸ್ಟರ್ ವಿಧ” ಇದರಲ್ಲಿ “ಮ್ಯಟೇಷನ್" ಆಯ್ಕೆ ಮಾಡಿ, Search
ನಂತರ ಸರ್ಚ್ ( Search) ಬಾರ್ ನಲ್ಲಿ ನಲ್ಲಿ ನಿಮ್ಮ ಗ್ರಾಮದ ಹೆಸರು ನಮೂದಿಸಿ,
ನಂತರ ನಿಮ್ಮ ಗ್ರಾಮದ ಎಲ್ಲಾ ಮುಟೇಷನ್ ಕಡತಗಳು ತೋರಿಸುತ್ತದೆ, ನಂತರ ನಿಮಗೆ ಬೇಕಾದ ದಾಖಲೆಯನ್ನು ಆಯ್ಕೆ ಮಾಡಿಕೊಂಡು ಓಪನ್ ಮಾಡಿ.
ನಂತರ ನಿಮಗೆ ಅವಶ್ಯಕತೆ ಇರುವ ಪೇಜ್ ನಂಬರನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ತಗಲುವ ಶುಲ್ಕವನ್ನು Online ಪಾವತಿಸಿ ನಿಮ್ಮ ದಾಖಲೆಯನ್ನು ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು.